Wednesday, 22 May 2019

ಮುಂಗಾರು ಮಳೆ (mungaru male)

Super ಆಗಿರೋ ಹುಡ್ಗಿನ ನೋಡ್ದೆ
ಹುಡ್ಗಿನ ನೋಡ್ಕೊಂಡು ಮೊರಿಲಿ ಬಿದ್ದೆ
ಹುಡುಗಿ ಕೈ ಹಿಡ್ಕೊಂಡು ಮೇಲೆ ಎದ್ದೆ
ಮತ್ತೆ ಬರ್ತಾಳೆ ಅಂತ ಕಾಯ್ತಾ ಇದ್ದೆ!!

ಬೇರೆ ಊರಿಗೆ ಮದುವೆಗೆ ಹೋದೆ
ಅಲ್ಲಿ ಅದೇ ಹುಡ್ಗಿನ ಮತ್ತೆ ನೋಡ್ದೆ
ತುಂಬ ಖುಶಿ ಇಂದ ಮಾತಾಡೋಕೆ ಹೋದೆ
ಅವಾಗ ಗೊತ್ತಾಯ್ತು ಮಾಡುವೆ ಅದೇ ಹುಡುಗಿದೇ!!

ಬೇಜಾರು ಮಾಡ್ಕೊಂಡು ವಾಪಾಸ್ ಹೋದೆ
ಹುಡುಗಿ ಕೆಣಕಿದಳು ಅಂತ ಮತ್ತೆ ಬಂದೆ
ಆಮೇಲೆ ಬಿದ್ದೆ ಹುಡುಗಿ ಹಿಂದೆ
ಅವರ ಅಪ್ಪ Military man ಅಂತ ಗೊತ್ತಾಗೋದೇ..??!!

ಹುಡುಗಿ ಅಮ್ಮನಿಗೆ ಇಷ್ಟ ಆದೆ
ಹುಡುಗಿ ಅಪ್ಪಗೆ ಹತ್ತಿರ ಆದೆ
ಮನೆ ಅವರನೆಲ್ಲ impress ಮಾಡ್ದೆ
ಸಿಕ್ಕಾಪಟ್ಟೆ ಕುಶಿ ಆಗಿದ್ದೆ!!

ಓಡಿ ಹೊಗೋಕೆ ದಾರಿ ಮಾಡ್ದೆ
ಹುಡುಗಿನ ಕರ್ಕೊಂಡು ದೇವಸ್ತಾನಕ್ಕೆ ಹೋದೆ
ಬಟ್ಟೆ ಮಹಿಮೆ ಇಂದ ಸುಸ್ತ್ ಆಗೋದೇ
ಎಣ್ಣೆ ಹೊಡಿದು tight ಆಗೋದೇ!!

ಹುಡುಗಿಗೆ ಒಂದು ಕವನ ಹೇಳ್ದೆ
ಹುಡುಗಿಗು ತುಂಬಾ ಹತ್ತಿರ ಆದೆ
ಪ್ರೀತಿನಲ್ಲಿ ಮುಳುಗಿ ಹೋದೆ
ಓಡಿ ಹೋಗೋದು ಅಂತ ಡಿಸೈಡ್ ಮಾಡ್ದೆ!!

ಹುಡುಗಿ ಮನೇಲಿ matter ಹೇಳದೆ
ತುಂಬಾ ದೊಡ್ದು ತಪ್ಪು ಮಾಡ್ದೆ
ಅವ್ರ ಅಪ್ಪಗೆ heart problem ಅಂತ ಕೇಳ್ದೆ
ಅವ್ರ ಅಮ್ಮ ಹೇಳಿದಕ್ಕೆ yes ಅಂದೇ!!

ಎಲ್ಲರ ನಂಬಿಕೆಯನು ನಾ ಉಳಿಸಿದೆ
ಹುಡ್ಗಿಗೆ ಮಾತ್ರ ಮೋಸ ಮಾಡ್ದೆ
ಹುಡ್ಗಿನ ನಾನು ತ್ಯಾಗ ಮಾಡ್ದೆ
ನಾನು ದೇವದಾಸ್ ಆಗೇ ಹೋದೆ!!

ನಂಬಿಕೆಯನು ಗಳಿಸೋದು ಕಷ್ಟ ಆದ್ರೆ ನಂಬಿಕೆನ ಉಳಿಸಿಕೊಕೊಳ್ಳೋದು ತುಂಬಾ ಕಷ್ಟ!!

ಇದು ನನ್ನ story ಅಲ್ಲ ಕಣ್ರೀ ಮುಂಗಾರು ಮಳೆ (mungaru male) ಕಥೆ ಕಣ್ರೀ....!!!!!!!!!!!!!!!!!!!!

ಪ್ರೀತಿಯ ಒಂದು ಮಿಂಚು ನೀ

ಪ್ರೀತಿಯ ಒಂದು ಮಿಂಚು ನೀ,
ಮಿಂಚಿಗೆ ಸಿಕ್ಕ ಒಣಮರ ನಾ,
ಸುಟ್ಟು ಭಸ್ಮ ಮಾಡಿದ ತೃಪ್ತಿ ನಿನಗೆ,
ಮತ್ತೆ ಚಿಗುರುವ ಗುಟುಕು ಆಸೆ ನನಗೆ,
ನನ್ನ ಮನದ ಚಿಗುರಿಗೆ ನೀರೆರೆ
ಆಗು ನನ್ನ ಬದುಕಿಗೆ ಆಸರೆ!!

ನಿಜ ಹೇಳು ಪ್ರಿಯೆ ನೀ ನನ್ನ ಮರೆತೆಯ,
ಮರೆಯದಿದ್ರು ಮರೆತಂತೆ ನಟಿಸುವೆಯ,
ಮರೆತದ್ದೆ ಅದ್ರೆ ಹೇಗೆ ಅಂತ ತಿಳಿಸುವೆಯ.
ಅದು ಹುಟ್ಟಿನಿಂದಲೇ ಬರುವ ವಿದ್ಯೆಯ,
ನನಗು ನಿನ್ನ ಮರೆವ ಪಾಠ ಕಲಿಸುವೆಯ,
ನೀ ಕಲಿಸಿದರು ನಾ ಮರೆಯೊದು ಅಸಾದ್ಯ!!

Friday, 19 April 2019

ಗೆಳತಿ

ನೀನಿಲ್ಲದ ಜೀವವೆತಕೋ.......ನೀನಿಲ್ಲದ ಭಾವವೆತಕೋ ........ನೀನಿಲ್ಲದೆ ಈ ಜಗವೆತಕೋ.......
 
ನಾ ಬರೆದ ಕವಿತೆಗಳ ಒಡತಿ
 
ನೀನಾಗಿರಲಿಲ್ಲ ಗೆಳತಿ!!
 
ನೀನೆ ಆಗಿದ್ದರೆ ಆ ಒಡತಿ..
 
ಏಕೆ ಮರೆಯಾಗುತ್ತಿದ್ದೆ ಆ ರೀತಿ
 
ಮರೆತು ನನ್ನ ನಿರ್ಮಲ ಪ್ರೀತಿ!!
 
ಅರ್ಥ ಮಾಡಿಕೊ ನನ್ನ ಪರಿಸ್ತಿತಿ..
 
ನಿನ್ನ ನೋಡದೆ ಕುಗ್ಗಿದೆ ನನ್ನ ಕಣ್ಣಿನ ಕಾಂತಿ..
 
ಮರಗಟ್ಟಿದ ನನ್ನ ಮನಸ್ಥಿತಿ ..
 
ನನ್ನ ಹೃದಯ ಬಯಸುತ್ತಿದೆ ನಿನ್ನ ಪ್ರೀತಿ!!
 
ದಯಮಾಡಿ ಒಪ್ಪಿಕೊ ನನ್ನನ್ನು ಗೆಳತಿ!!