Saturday, 30 August 2014

ನಾ ತಪ್ಪಿ ನಡೆದರೆ.. ಕ್ಷಮೆ ಇರಲಿ.. ನಾ ನಿಮ್ಮಂತೆಯೇ ಮಾನವ..!

ನಾ ತಪ್ಪಿ ನಡೆದರೆ... ಕ್ಷಮೆ ಇರಲಿ...
ನಾ ನಿಮ್ಮಂತೆಯೇ ಮಾನವ..!

ಒಮ್ಮೊಮೆ... ಅಡಿಗಡಿಗೆ ಎಡವಿ ಏಳುವೆ...
ನುಡಿಗಳಲಿ ತೊದಲುವೆ..!
ಕೆಲವೊಮ್ಮೆ... ಸ್ವಾರ್ತಿಯಂತೆ ಯೋಚಿಸುವೆ...
ಮಿಡಿವ ಮನಕೆ ತುಡಿಯದಿರುವೆ..!

ಒಮ್ಮೊಮ್ಮೆ... ತಪ್ಪೆಂದು ತಿಳಿದೂ.. ತಿದ್ದಿಕೊಳ್ಳಲಾಗದೆ...
ಸರಿಯೆಂಬುದೆಲ್ಲ ಅನುಸರಿಸಲಾಗದೆ..!
ಕೆಲವೊಮ್ಮೆ... ಪಡೆದ ಸುಖದಿ ತೃಪ್ತಿಯಾಗದೆ
ಮನಸ ತುಮುಲಗಳ ವ್ಯಕ್ತ ಪಡಿಸಲಾಗದೆ.. ಕಳೆದದ್ದೇನೋ..? ಹುಡುಕಲಾಗದೆ..!

ನಾ ತಪ್ಪಿ ನಡೆದರೆ.. ಕ್ಷಮೆ ಇರಲಿ..
ನಾ ನಿಮ್ಮಂತೆಯೇ ಮಾನವ..!

No comments:

Post a Comment